ChatGPT Work

Slack ಮತ್ತು Microsoft Teams ನಲ್ಲಿ @ChatGPT

ಪ್ರಶ್ನೆಗಳಿಗೆ ಉತ್ತರ ಪಡೆಯಲು, ನಿರ್ಧಾರಗಳ ಅಡೆತಡೆ ನಿವಾರಿಸಲು ಮತ್ತು ಅಸ್ತವ್ಯಸ್ತ ಚರ್ಚೆಗಳಿಂದ ಯೋಜನೆಗಳು, ವರದಿಗಳು ಹಾಗೂ ಪ್ರೆಸೆಂಟೇಶನ್‌ಗಳನ್ನು ರೂಪಿಸಲು ನಿಮ್ಮ ತಂಡದ ಚಾನೆಲ್‌ಗಳಿಗೆ @ChatGPT ಅನ್ನು ಸೇರಿಸಿ.

ChatGPT Business, Enterprise, and Edu ಬಳಕೆದಾರರಿಗೆ ಲಭ್ಯವಿದೆ. @ChatGPT ಅನ್ನು ಸೆಟಪ್ ಮಾಡಲು ನಿಮ್ಮ ನಿರ್ವಾಹಕರನ್ನು ಕೇಳಿ.

ಮೆಸೇಜ್ ಕಾಂಪೋಸರ್‌ನ ಮೇಲಿರುವ @ChatGPT ಅನ್ನು ಉದ್ದೇಶಿಸಿರುವ Slack ಮತ್ತು Teams ಐಕಾನ್‌ಗಳು.

ಗುಂಪಿನ ಥ್ರೆಡ್‌ ಅನ್ನು ಅರ್ಥಮಾಡಿಕೊಳ್ಳಲು ChatGPT ಗೆ ಅವಕಾಶ ನೀಡಿ

ತಂಡವಾಗಿ ChatGPT ಜೊತೆ ಕೆಲಸ ಮಾಡಿ

ಬಿಡುಗಡೆಯ ಯೋಜನೆ ರೂಪಿಸಲು ಅಥವಾ ಬಗ್‌ ಕುರಿತು ತನಿಖೆ ನಡೆಸಲು ನೆರವು ಪಡೆಯಲು ನಿಮ್ಮ ತಂಡದ ಚಾನಲ್ ಅಥವಾ ಥ್ರೆಡ್‌ನಲ್ಲಿ @ChatGPT ಅನ್ನು ಉಲ್ಲೇಖಿಸಿ. ತಂಡದ ಸದಸ್ಯರು ಹಿನ್ನೆಲೆ ಮಾಹಿತಿ, ಪ್ರಶ್ನೆಗಳು ಮತ್ತು ಫೀಡ್‌ಬ್ಯಾಕ್‌ಗಳನ್ನು ಸೇರಿಸುವ ಮೂಲಕ ಒಟ್ಟಾಗಿ ಕೆಲಸವನ್ನು ರೂಪಿಸಬಹುದು.

ಥ್ರೆಡ್‌ನ ಆಚೆಯ ಸಂದರ್ಭವನ್ನೂ ಸೇರಿಸಿ

ಸಂಭಾಷಣೆಯಿಂದ ಹೊರಹೋಗದೆ, ಸಂಪರ್ಕಿತ ಟೂಲ್‌ಗಳಿಂದ ನಿಮ್ಮ ತಂಡಕ್ಕೆ ಅಗತ್ಯವಿರುವ ಪ್ರಾಜೆಕ್ಟ್ ವಿವರಗಳು, ಸಂಬಂಧಿತ ಫೈಲ್‌ಗಳು ಅಥವಾ ಅಪ್‌ಡೇಟ್‌ಗಳನ್ನು ಹುಡುಕುವಂತೆ ChatGPT ಅನ್ನು ಕೇಳಿ.

ಚರ್ಚೆಗಳನ್ನು ಬಳಸಬಹುದಾದ ಕೆಲಸವನ್ನಾಗಿ ಪರಿವರ್ತಿಸಿ

ಅಸ್ತವ್ಯಸ್ತ ಸಂಭಾಷಣೆಗಳಿಂದ ಹಂಚಿಕೊಳ್ಳಲು ಸಿದ್ಧವಾಗಿರುವ ಸಾರಾಂಶ, ಪ್ರೆಸೆಂಟೇಶನ್, ಸ್ಪ್ರೆಡ್‌ಶೀಟ್ ಅಥವಾ ಯೋಜನೆಯನ್ನು ಸಿದ್ಧಪಡಿಸಲು ChatGPT ಅನ್ನು ಕೇಳಿ.

ಇದು ಹೇಗೆ ಕೆಲಸ ಮಾಡುತ್ತದೆ

ತಂಡದ ಚಾನಲ್‌ ಅಥವಾ ಥ್ರೆಡ್‌ನಲ್ಲಿ @ChatGPT ಅನ್ನು ಟ್ಯಾಗ್ ಮಾಡಿ, ನಿಮಗೆ ಏನು ಬೇಕೆಂದು ತಿಳಿಸಿ. ನೀವು ChatGPT ಗೆ ನೇರವಾಗಿಯೂ ಸಂದೇಶ ಕಳುಹಿಸಬಹುದು.

ತಂಡದ ಸದಸ್ಯರೊಬ್ಬರು Microsoft Teams ನಲ್ಲಿ @ChatGPT ಅನ್ನು ಉಲ್ಲೇಖಿಸಿದಾಗ, ChatGPT ತಂಡದ ನಿರ್ಧಾರವನ್ನು ಉತ್ತರವಾಗಿ ನೀಡುತ್ತದೆ.

@ChatGPT ಸಂಭಾಷಣೆಗೆ ಸೇರಿದಾಗ ಏನೆಲ್ಲ ಸಾಧ್ಯ ಎಂಬುದನ್ನು ನೋಡಿ

ChatGPT Slack ನಲ್ಲಿ ಚೆಕ್‌ಔಟ್‌ ಬಗ್‌ ಕುರಿತು ತನಿಖೆ ಮಾಡಿ, ಪರಿಹಾರದೊಂದಿಗೆ ಪುಲ್‌ ರಿಕ್ವೆಸ್ಟ್‌ ತೆರೆಯುತ್ತದೆ.

ಬಗ್‌ ಕುರಿತು ತನಿಖೆ ನಡೆಸಲು, ಅದರ ಪರಿಹಾರ ವಿಧಾನವನ್ನು ನಿಮ್ಮ ತಂಡದೊಂದಿಗೆ ಪರಿಶೀಲಿಸಲು ಮತ್ತು ಅದೇ ಸಂಭಾಷಣೆಯಲ್ಲೇ ಪರಿಹಾರದೊಂದಿಗೆ ಪುಲ್‌ ರಿಕ್ವೆಸ್ಟ್‌ ತೆರೆಯಲು ChatGPT ಅನ್ನು ಕೇಳಿ.

ಎಂಟರ್‌ಪ್ರೈಸ್‌ಗಾಗಿ ನಿರ್ಮಿಸಲಾಗಿದೆ

ತಂಡಗಳಿಗೆ @ChatGPT ಪ್ರವೇಶವನ್ನು ನೀಡಿ, ಕೆಲಸಕ್ಕೆ ಸಂಬಂಧಿಸಿದ ಹಂಚಿಕೆಯ ಸಂಪರ್ಕಗಳು ಮತ್ತು ಅನುಮತಿಗಳನ್ನು ನಿರ್ವಾಹಕರು ನಿರ್ವಹಿಸಬಹುದು.

ಕಂಪನಿ ನಿರ್ವಹಿಸುವ ಪ್ರವೇಶ

ಕಂಪನಿಯ ಯಾವ ಪರಿಕರಗಳನ್ನು ಸಂಪರ್ಕಿಸಬೇಕು ಮತ್ತು @ChatGPT ಯಾವುದನ್ನು ಪ್ರವೇಶಿಸಬಹುದು ಎಂಬುದನ್ನು ನಿರ್ವಾಹಕರು ಆಯ್ಕೆ ಮಾಡುತ್ತಾರೆ. ಇನ್ನಷ್ಟು ತಿಳಿಯಿರಿ.

ಆಡಿಟ್ ಲಾಗ್‌ಗಳು ಮತ್ತು ಮೇಲ್ವಿಚಾರಣೆ

ಏಜೆಂಟ್‌ಗಳ ಚಟುವಟಿಕೆಯನ್ನು ಟ್ರ್ಯಾಕ್ ಮಾಡಿ ಮತ್ತು ಲಾಗ್‌ಗಳನ್ನು ಪರಿಶೀಲಿಸಿ, ಏಜೆಂಟ್‌ಗಳು ಏನು ಮಾಡಿದವು ಮತ್ತು ವರ್ಕ್‌ಫ್ಲೋಗಳು ಹೇಗೆ ಕಾರ್ಯಗತಗೊಂಡಿವೆ ಎಂಬುದನ್ನು ಅರ್ಥಮಾಡಿಕೊಳ್ಳಿ.

ನಿರ್ವಾಹಕರಿಗಾಗಿ ಕೇಂದ್ರೀಕೃತ ನಿರ್ವಹಣೆ

ಕೇಂದ್ರ ಕನ್ಸೋಲ್‌ನಿಂದ ಏಜೆಂಟ್‌ಗಳು, ವೆಚ್ಚ ಮತ್ತು ಪ್ಲಗಿನ್‌ಗಳನ್ನು ನಿರ್ವಹಿಸಿ. ಇದರಿಂದ ತಂಡಗಳು ಆಟೊಮೇಷನ್‌ ಅನ್ನು ಸುರಕ್ಷಿತವಾಗಿ ವಿಸ್ತರಿಸಬಹುದು.

ನಿಯಂತ್ರಣ ನಿಮ್ಮ ಕೈಯಲ್ಲೇ ಇರುತ್ತದೆ

ಸಂಪರ್ಕಿತ ಟೂಲ್‌ಗಳಲ್ಲಿ ಕ್ರಮ ಕೈಗೊಳ್ಳುವ ಮೊದಲು @ChatGPT ನಿಮ್ಮ ಅನುಮೋದನೆಯನ್ನು ಕೇಳುತ್ತದೆ, ಆದ್ದರಿಂದ ಬದಲಾವಣೆಗಳು ಆಗುವ ಮೊದಲೇ ನೀವು ಅವುಗಳನ್ನು ಪರಿಶೀಲಿಸಬಹುದು.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಇಲ್ಲ. ವೈಯಕ್ತಿಕ ChatGPT ಪರವಾನಗಿ ಇಲ್ಲದ ತಂಡದ ಸದಸ್ಯರು ಸಹ ಸಕ್ರಿಯಗೊಳಿಸಲಾದ ಚಾನಲ್‌ಗಳಲ್ಲಿ @ChatGPT ಅನ್ನು ಬಳಸಬಹುದು. ಪ್ರವೇಶವು ನಿಮ್ಮ ಸಂಸ್ಥೆಯ ಸೆಟಪ್ ಅನ್ನು ಅವಲಂಬಿಸಿರುತ್ತದೆ. ಆದರೆ , ನಿಮ್ಮ ವೈಯಕ್ತಿಕ ಖಾತೆಯನ್ನು @ChatGPT ಗೆ ಸಂಪರ್ಕಿಸುವುದರಿಂದ ಖಾಸಗಿ ಡಾಕ್ಯುಮೆಂಟ್‌ಗಳನ್ನು ಓದುವುದು ಅಥವಾ ಎಡಿಟ್‌ ಮಾಡುವಂತಹ ಹೆಚ್ಚುವರಿ ಪ್ರವೇಶವನ್ನು ಅದಕ್ಕೆ ನೀಡಬಹುದು. @ChatGPT ನಿಮ್ಮ ವೈಯಕ್ತಿಕ ಖಾತೆಗಳು ಅಥವಾ ಅನುಮತಿಗಳನ್ನು ಸ್ವಯಂಚಾಲಿತವಾಗಿ ಪಡೆದುಕೊಳ್ಳುವುದಿಲ್ಲ.

ಇನ್ನಷ್ಟು ಅನ್ವೇಷಿಸಿ

  • ChatGPT Work

    ನಿಮ್ಮ ಟೂಲ್‌ಗಳು ಮತ್ತು ಫೈಲ್‌ಗಳ ಸಂದರ್ಭವನ್ನು ChatGPT Work ಹೇಗೆ ಪೂರ್ಣಗೊಂಡ ಡಾಕ್ಯುಮೆಂಟ್‌ಗಳು, ಪ್ರೆಸೆಂಟೇಶನ್‌ಗಳು ಮತ್ತು ವಿಶ್ಲೇಷಣೆಗಳಾಗಿ ಪರಿವರ್ತಿಸುತ್ತದೆ ಎಂಬುದನ್ನು ನೋಡಿ.

  • ChatGPT ಕಲಿಕೆ

    ChatGPT Work ಬಳಸಲು ಪ್ರಾರಂಭಿಸುವುದಕ್ಕಾಗಿ ಪ್ರಾಯೋಗಿಕ ಮಾರ್ಗದರ್ಶಿಗಳು ಮತ್ತು ಉದಾಹರಣೆಗಳನ್ನು ಅನ್ವೇಷಿಸಿ.

  • ChatGPT ಯಲ್ಲಿ ಪ್ಲಗಿನ್‌ಗಳು

    ಸಂದರ್ಭವನ್ನು ಪಡೆಯಲು ಮತ್ತು ನೇರವಾಗಿ ChatGPT ನಲ್ಲೇ ಕಾರ್ಯಗಳನ್ನು ಪೂರ್ಣಗೊಳಿಸಲು ನಿಮ್ಮ ದೈನಂದಿನ ಟೂಲ್‌ಗಳನ್ನು ಸಂಪರ್ಕಿಸಿ.

ತಂಡದ ಥ್ರೆಡ್‌ಗೆ ChatGPT ಅನ್ನು ಸೇರಿಸಿ